ಬೇರೊಬ್ಬನ ಜೊತೆಗೆ ಕಳ್ಳಾಟ ಆಡುತ್ತಿದ್ದ ಹೆಂಡತಿಗೆ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಏನು ಮಾಡಿದ್ಲು ಗೊತ್ತಾ? ಸುಂದರಿಯನ್ನು ಮದುವೆಯಾದ, ಮುಂದೆನಾದ ನೋಡಿ!!

ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಪ್ರೀತಿ, ನಂಬಿಕೆ ಎಲ್ಲವೂ ಇರಬೇಕು. ತಪ್ಪು ಮಾಡಿದಾಗ ಕ್ಷಮಿಸುವ ಗುಣವೂ ಇರಬೇಕು. ಆಗ ಮಾತ್ರ ಜೀವನವು ಚೆನ್ನಾಗಿರುತ್ತದೆ. ಆದರೆ ಮಾಡಿರುವ ತಪ್ಪು ಕ್ಷಮೆಗಿಂತ ದೊಡ್ಡದಾಗಿದ್ದರೆ? ಹಾಗಿದ್ದರೂ ಕೆಲವರು ಸಂಸಾರ ಉಳಿಯಲಿ ಅಂತ ಕ್ಷಮಿಸುತ್ತಾರೆ. ಕೆಲವರಿಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇರೊಲ್ಲಾ ನೋಡಿ. ಈ ಘಟನೆ ಬಗ್ಗೆ ಗೊತ್ತಾದ್ರೆ ನೀವೂ ಚೆನ್ನಾಗಿ ಬೈಕೊಳ್ಳುತ್ತೀರಾ.

ಆಕೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಡ ಹೆಂಡತಿ ಮೋಸ ಮಾಡುತ್ತಿರುವುದು ಗೊತ್ತಾಗಿ ಪ್ರಶ್ನೆ ಮಾಡುತ್ತಾನೆ. ಆದರೆ ಆಕೆ ಅವನಿಗೆ ಎದುರು ವಾದಿಸುತ್ತಾಳೆ. ಕೊನೆಗೆ ಆ ಘಟವಾನಿ ಹೆಂಗಸು ಮಾಡಿದ್ದೇನು ಗೊತ್ತೇ? ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಹೂಟಗಳ್ಳಿ ನಿವಾಸಿ ಮಂಜು ಎನ್ನುವವನ ಜೊತೆ ಬೋಗಾದಿ ನಿವಾಸಿಯಾಗಿದ್ದ ಲಿಖಿತಾ ವಿವಾಹವಾಗಿತ್ತು. ಇವರ ಮದುವೆಯಾಗಿ ಬರೋಬ್ಬರಿ 12 ವರ್ಷಗಳೇ ಕಳೆದಿವೆ.


ಗುರು ಹಿರಿಯರ ಒಪ್ಪಿಗೆ ಪಡೆದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇಬ್ಬರು ಮಕ್ಕಳು. ಮದುವೆಯಾಗಿ ಇಷ್ಟು ವರ್ಷ ಗಂಡನ ಜೊತೆ ಸಂಸಾರ ನಡೆಸಿದ್ದ ಲಿಖಿತಾ ಇದ್ದಕ್ಕಿದ್ದ ಹಾಗೆ ಗಂಡನನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂದು ಊರಿನವರಿಗೆ ಗೊತ್ತಾಗಿತ್ತು. ಆದರೆ ಆಕೆಯನ್ನು ಪುನಃ ಕರೆಸಿ ಹಿರಿಯರು ರಾಜಿ ಪಂಚಾಯಿತಿ ಮಾಡಿ ಬುದ್ದಿ ಹೇಳಿ ಲಿಖಿತಾಳನ್ನು ಮತ್ತೆ ಗಂಡನ ಬಳಿ ವಾಪಸ್ ಹೋಗುವಂತೆ ಮಾಡಿದ್ದರು.

ಆದರೆ ಹಳೆ ಚಾಳಿ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಎನ್ನುವಂತೆ ಲಿಖಿತ ಮಾತ್ರ ಪ್ರಿಯಕರನ ಸಹವಾಸ ಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಆಕೆಯ ಪತಿ ಜಗಳವಾಡಿದ್ದಾನೆ ಇನ್ನು ಮುಂದೆ ಆತನ ಸಹವಾಸ ಮಾಡದಂತೆಯೂ ಎಚ್ಚರಿಕೆ ನೀಡಿದ್ದ. ಪತಿ ಪ್ರಿಯಕರನ ಜೊತೆ ಸೇರಬಾರದು ಎಂದು ಹೇಳಿದ್ದಕ್ಕೆ ಲಿಖಿತ ಕೋಪಗೊಂಡಿದ್ದಾಳೆ. ಕೊನೆಗೆ ಆಕೆ ಮಾಡಿದ್ದೇನೆ ಗೊತ್ತಾ?

ರಾತ್ರೋರಾತ್ರಿ ತನ್ನ ಪ್ರಿಯಕರನನ್ನ ಕರೆಸಿಕೊಂಡು ಪತಿಯನ್ನು ಕೊ’ಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ತನಿಖೆಯನ್ನು ನಡೆಸಿದ್ದಾರೆ ಜೊತೆಗೆ ಲಿಖಿತಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಹ’ತ್ಯೆಗೆ ಸಂಬಂಧಪಟ್ಟ ಹಾಗೆ ಲಿಖಿತಳನ್ನು ಇನ್ನಷ್ಟು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
LihatTutupKomentar