ಯುವತಿಯ ಸ್ತನಗಳು ವಿಕಸನಗೊಂಡಿಲ್ಲ, ಹಾಗಾಗಿ ಇದನ್ನ ರೇ-ಪ್ ಅಂತ ಪರಿಗಣಿಸಬಾರದು”: ವಕೀಲನ ವಾದ…. ಬಳಿಕ ಹೈಕೋರ್ಟ್ ಕೊಟ್ಟ ತೀರ್ಪೇನು ನೋಡಿ

ಲೈಂಗಿಕ ಕಿರುಕುಳಕ್ಕೆ ಒಳಗಾದವರ ಎದೆಯು (ಸ್ತನಗಳು) ವಿಕಸಿತಗೊಳ್ಳದಿದ್ದರೂ ತಪ್ಪು ಉದ್ದೇಶದಿಂದ ಅವುಗಳನ್ನ ಸ್ಪರ್ಶಿಸುವುದು ಲೈಂಗಿಕ ಅಪರಾಧವಾಗುತ್ತದೆ ಎಂದು ಪಶ್ಚಿಮ ಬಂಗಾಳದ ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ಆರೋಪಿಯು ಸಂತ್ರಸ್ತೆಯ ನಿರ್ದಿಷ್ಟ ಭಾಗವನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸಿದ್ದಾನೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವ ಪ್ರಶ್ನೆಯೇ ಇಲ್ಲ, ಈ ಪ್ರಕರಣದಲ್ಲಿ ಬಾಲಕಿಯ ಸ್ತನಗಳು ಬೆಳವಣಿಗೆಯೇ ಆಗಿಲ್ಲ ಎಂದು ವೈದ್ಯಾಧಿಕಾರಿ ಹೇಳಿಕೆ ನೀಡಿದ್ದರು ಎಂದು ವಾದ‌ಮಂಡಿಸಿದರು. ಆದರೆ, ಈ ವಾದಕ್ಕೆ ನ್ಯಾಯಾಲಯ ಸಹಮತ ವ್ಯಕ್ತಪಡಿಸಲಿಲ್ಲ.

ಇದಕ್ಕೆ ನ್ಯಾಯಮೂರ್ತಿ ವಿವೇಕ್ ಚೌಧರಿ ಅವರು ಪ್ರತಿಕ್ರಿಯಿಸುತ್ತ, 13 ವರ್ಷದ ಬಾಲಕಿ ಸ್ತನಗಳು ವಿಕಸಿತವಾಗಿಯೋ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ, ವೈದ್ಯಕೀಯ ಕಾರಣಗಳಿಂದಾಗಿ ಆಕೆಯ ಸ್ತನಗಳು ವಿಕಸಿತವಾಗದಿದ್ದರೂ ಸಹ, ಹುಡುಗಿಯ ದೇಹದ ಒಂದು ನಿರ್ದಿಷ್ಟ ಭಾಗವನ್ನು ಸ್ತನ ಎಂದೇ ಕರೆಯಲಾಗುತ್ತದೆ ಎಂದರು. POCSO ಕಾಯಿದೆಯ ಸೆಕ್ಷನ್ 7 ಅನ್ನು ವ್ಯಾಖ್ಯಾನಿಸಿದ ನ್ಯಾಯಮೂರ್ತಿ ಚೌಧರಿ, ಮಗುವಿನ ಶಿಶ್ನ, ಯೋನಿ, ಗುದದ್ವಾರ ಅಥವಾ ಎದೆಯನ್ನು ಸ್ಪರ್ಶಿಸುವುದು ಅಥವಾ ಲೈಂಗಿಕ ಉದ್ದೇಶದಿಂದ ಮಗುವನ್ನು ಸ್ಪರ್ಶಿಸುವುದು ಲೈಂಗಿಕ ಕಿರುಕುಳದ ಅಪರಾಧವಾಗಿದೆ ಎಂದರು.

ವಾಸ್ತವವಾಗಿ, 2017 ರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿತು. ಈ ವೇಳೆ 13 ವರ್ಷದ ಬಾಲಕಿಯ ತಾಯಿ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಬಂದು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ಮುಖಕ್ಕೆ ಮುತ್ತಿಟ್ಟಿದ್ದಾರೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು.

ಸಂತ್ರಸ್ತೆಯನ್ನು ಚುಂಬಿಸುವ ಉದ್ದೇಶವನ್ನು ಪ್ರಶ್ನಿಸಿದ ನ್ಯಾಯಾಲಯ, ‘“ಆರೋಪಿಯು ತನ್ನ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಿ ಚುಂಬಿಸಿದ್ದಾನೆ ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ. ಸಂತ್ರಸ್ತ ಹುಡುಗಿಗೆ ಯಾವುದೇ ರೀತಿಯ ಸಂಬಂಧವಿಲ್ಲದ ವಯಸ್ಕ ಪುರುಷನು ಆಕೆಯ ಮನೆಗೆ ಆಕೆಯ ಪೋಷಕರು ಇಲ್ಲದಿದ್ದಾಗ ಬಂದು ಅವಳನ್ನು ಚುಂಬಿಸಲು ಯಾಕೆ ಹೋಗುತ್ತಾನೆ?. ವ್ಯಕ್ತಿಯ ಲೈಂಗಿಕ ಉದ್ದೇಶವನ್ನು ಸಂಪರ್ಕ ಮತ್ತು ಸುತ್ತಮುತ್ತಲಿನ ಸಂದರ್ಭಗಳಿಂದ ಕಂಡುಹಿಡಿಯಬಹುದು” ಎಂದು ನ್ಯಾಯಾಲಯ ಹೇಳಿದೆ.

ಲೈಂಗಿಕ ಉದ್ದೇಶಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯು ಆಕೆ ಮತ್ತು ಆಕೆಯ ಪತಿ ಇಲ್ಲದ ಸಮಯದಲ್ಲಿ ದೂರುದಾರರ ಮನೆಗೆ ನುಗ್ಗಿ ಸಂತ್ರಸ್ತ ಬಾಲಕಿಯ ದೇಹವನ್ನು ಸ್ಪರ್ಶಿಸಿ ಆಕೆಯನ್ನು ಚುಂಬಿಸಿರುವುದು ಆರೋಪಿಗೆ ಲೈಂಗಿಕ ಉದ್ದೇಶವಿರುವುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

LihatTutupKomentar