ಗಂಡ ಹೆಂಡತಿಯರ ಸಂಬಂಧ ಚೆನ್ನಾಗಿರಲು ಏನ್ ಮಾಡಬೇಕು ಗೊತ್ತಾ? ಚಾಣಿಕ್ಯ ಹೇಳಿದ್ದು ಹೀಗೆ

Chanikya nithi: ಚಾಣಕ್ಯರ ಪ್ರಕಾರ ಪತಿ-ಪತ್ನಿಯರ ಸಂಬಂಧ ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕೆಂದರೆ ಇವುಗಳನ್ನು ಪಾಲಿಸಿ ಎಂದು ಹೇಳಿದ್ದಾರೆ. (Chanikya nithi)

ವೈವಾಹಿಕ ಜೀವನ ಮತ್ತು ಗಂಡ ಹೆಂಡತಿಯ ನಡುವಿನ ಸಂಬಂಧವು ಯಾವಾಗಲೂ ಪರಸ್ಪರ ಹೊಂದಾಣಿಕೆಯ ಮೇಲೆ ಅವಲಂಬಿಸಿರುತ್ತದೆ.ಪತಿ- ಪತ್ನಿಯರ ನಡುವೆ ಸಮನ್ವಯತೆಯ ಕೊರತೆ ಇದ್ದಾಗ, ಪರಸ್ಪರ ಕಲಹ ಉಂಟಾಗಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ ಎಂದು ಶ್ರೇಷ್ಠ ವಿದ್ವಾಂಸರಾದಂತಹ ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ದಾಂಪತ್ಯ ಜೀವನ ಸುಖಮಯವಾಗಿರಲು ಪತಿ ಪತ್ನಿಯರು ಯಾವತ್ತು ಒಬ್ಬರಿಗೊಬ್ಬರು ಅಹಂಕಾರ ತೋರಬಾರದು ಇಂದು ಚಾಲುಕ್ಯ ನೀತಿಯಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ವೈವಾಹಿಕ ಜೀವನದಲ್ಲಿ ಪತಿ-ಪತ್ನಿ ಇಬ್ಬರು ಕೂಡ ಬಂಡಿಯ ಎರಡು ಚಕ್ರಗಳಿದ್ದಂತೆ, ಎರಡು ಚಕ್ರಗಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರಗಾಡಿ ಸರಾಗವಾಗಿ ಮುಂದಕ್ಕೆ ಸಾಗುತ್ತದೆ. ಇವೆರಡರಲ್ಲಿ ಯಾವುದಾದರೂ ಒಂದು ಗಾಲಿಗೆ ಅಹಂಕಾರವಿದ್ದರೆ ಸಂಬಂಧದಲ್ಲಿ ಬಿರುಕು ನೋಡಬಹುದು.


ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಸಂಬಂಧದ ಗಟ್ಟಿತನಕ್ಕೆ ಪರಸ್ಪರರನ್ನು ಗೌರವಿಸುವುದು ತುಂಬಾ ಮುಖ್ಯ ಮತ್ತು ಇಬ್ಬರ ನಡುವೆ ಪ್ರೀತಿ ಮತ್ತು ಗೌರವ ಇದ್ದಾಗ ಮಾತ್ರ ಪತಿ ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಆದರಿಂದಲೇ ಚಾಣಕ್ಯ ನೀತಿಯಲ್ಲಿ ಪತಿ ಪತ್ನಿ ಸದಾ ಪರಸ್ಪರ ಗೌರವವನ್ನು ನೀಡಬೇಕು ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಯಾವತ್ತು ಬಿರುಕು ಉಂಟಾಗುವುದಿಲ್ಲ.

ಚಾಣಕ್ಯ ನೀತಿಯ ಪ್ರಕಾರ ಜನರು ಜೀವನದಲ್ಲಿ ಅನೇಕ ಸಂದರ್ಭಗಳು ಎದುರಾಗುತ್ತವೆ ಆದರೆ ಎಲ್ಲಾ ಸಂದರ್ಭಗಳಲ್ಲಿ ತಾಳ್ಮೆಯಿಂದ ಕೆಲಸ ಮಾಡುವವರ ಜೀವನವು ಯಶಸ್ವಿಯಾಗುತ್ತದೆ. ಪತಿ-ಪತ್ನಿಯರು ನೆಮ್ಮದಿಯಿಂದ ಜೀವನ ನಡೆಸಲು ತಾಳ್ಮೆಯನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ಪ್ರತಿಕೂಲ ಸಂದರ್ಭದಲ್ಲಿ ಜೀವನವನ್ನು ಮುನ್ನಡೆಸುವಲ್ಲಿ ಯಶಸ್ಸು ನೀಡುತ್ತದೆ.


ಆಚಾರ್ಯ ಚಾಣಕ್ಯರ ಪ್ರಕಾರ ಪತಿ-ಪತ್ನಿಯರು ತಮ್ಮ ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ತಮ್ಮ ನಡುವಿನ ವಿಷಯಗಳನ್ನು ಉಭಯರ ಮಟ್ಟಕ್ಕೆ ಸೀಮಿತವಾಗಿರಿಸಿಕೊಳ್ಳುವ ಪತಿ-ಪತ್ನಿಯರು ಯಾವಾಗಲೂ ಸಂತೋಷವಾಗಿರುತ್ತಾರೆ, ಆದ್ದರಿಂದ ಪತಿ-ಪತ್ನಿ ಕೂಡ ಈ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಯಾವುದೇ ಮೂರನೇ ವ್ಯಕ್ತಿಗೆ ವೈಯಕ್ತಿಕ ವಿಷಯಗಳನ್ನು ಹೇಳಬಾರದು.
LihatTutupKomentar