ಹಿಂದೆ ಮುಂದೆ ನೋಡದೆ ಮೇಘನ ರಾಜ್ ಅವರ ಖಾಸಗಿ ವಿಚಾರವನ್ನು ಬಹಿರಂಗವಾಗಿಯೇ ಹೇಳಿದ ತಾಯಿ ಪ್ರಮೀಳಾ ಜೋಷಾಯಿ!

Meghana Raj ನಟಿ ಮೇಘನಾ ರಾಜ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾಗಿರುವಂತಹ ಸುಂದರ ರಾಜ್(Sundar Raj) ಹಾಗೂ ಪ್ರಮೀಳಾ ಜೋಷಾಯಿ ದಂಪತಿಗಳ ಮುದ್ದಿನ ಮಗಳಾಗಿದ್ದಾರೆ. ತಂದೆ ತಾಯಿಗಳಿಬ್ಬರೂ ಕೂಡ ಸಿನಿಮಾ ಕಲಾವಿದರಾಗಿರುವ ಕಾರಣದಿಂದಾಗಿ ಅತ್ಯಂತ ಚಿಕ್ಕ ವಯಸ್ಸಿನಿಂದಲೂ ಕೂಡ ಸಿನಿಮಾ ರಂಗವನ್ನು ಅತ್ಯಂತ ಹತ್ತಿರದಿಂದ ಬಲ್ಲವರು. ಹೀಗಾಗಿ ಅವರಿಗೆ ಸಿನಿಮಾರಂಗಕ್ಕೆ ಕಾಲಿಡುವುದು ಅಷ್ಟೊಂದು ಕಷ್ಟಕರವಾಗಿರಲಿಲ್ಲ.

ಹೀಗಿದ್ದರೂ ಕೂಡ ನಟಿ ಮೇಘನಾ ರಾಜ್(Meghana Raj) ಅವರು ನಾಯಕನಟಿಯಾಗಿ ಕಾಲಿಟ್ಟದ್ದು ಮಲಯಾಳಂ ಚಿತ್ರರಂಗದಲ್ಲಿ. ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಪಡೆಯುವ ಮೂಲಕ ನಂತರ ಮತ್ತೆ ತಾಯಿನುಡಿ ಆಗಿರುವ ಕನ್ನಡ ಭಾಷೆಯ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪರಿಚಿತರಾಗುತ್ತಾರೆ.

ಇನ್ನು ಇತ್ತೀಚಿಗಷ್ಟೇ ಅವರ ತಾಯಿ ಆಗಿರುವಂತಹ ಪ್ರಮೀಳಾ ಜೋಷಾಯಿ ಅವರು ತಮ್ಮ ಮಗಳಿಗೆ ನಾವು ಮೊದಲಿನಿಂದಲೂ ಕೂಡ ಪ್ರತಿಯೊಂದು ವಿಚಾರದಲ್ಲಿ ಸಪೋರ್ಟ್ ಮಾಡಿಕೊಂಡು ಬಂದಿದ್ದು ಚಿರು(Chiru Sarja) ಹಾಗೂ ಮೇಘನಾ ಪ್ರೀತಿಯ ವಿಚಾರದಲ್ಲಿ ಕೂಡ ಎರಡು ಕುಟುಂಬಗಳು ಒಗ್ಗಟ್ಟಾಗಿ ನಿಂತು ಮದುವೆ ಮಾಡಿಕೊಟ್ಟಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಚಿಲುವನ್ನು ಕಳೆದುಕೊಂಡ ನಂತರವೂ ಕೂಡ ಪ್ರತಿಯೊಂದು ವಿಚಾರದಲ್ಲಿ ನಮ್ಮ ಮಗಳ ಬೆನ್ನೆಲುಬಾಗಿ ನಾವು ನಿಂತಿದ್ದೇವೆ ಎಂಬುದಾಗಿ ಹೇಳಿದ್ದಾರೆ‌.

ಇನ್ನು ಗಂಡ ಸುಂದರ್ ರಾಜ್(Sundar Raj) ಅವರ ಕೋಪದ ಕುರಿತಂತೆ ಕೂಡ ಮಾತನಾಡುತ್ತಾ ಅವರ ಮೂಗಿನ ಮೇಲೆ ಕೋಪ ಇರುತ್ತದೆ ಅವರಿಗೆ ಸಮಾಧಾನ ಮಾಡಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎನ್ನುವ ಹಾಸ್ಯಾಸ್ಪದ ವಿಚಾರಗಳನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ಮೇಘನ ರಾಜ್(Meghana Raj) ಅವರ ಬಗ್ಗೆ ಕೂಡ ಖುಷಿಯಿಂದಲೇ ಪ್ರಮೀಳಾ ಜೋಷಾಯಿ(Pramila Joshai) ಅವರು ನನ್ನ ಮಗಳ ಬಗ್ಗೆ ನೆನೆಸಿಕೊಂಡರೆ ನನಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.

LihatTutupKomentar