Rachita Ram Breaks Silence : ರಚಿತಾ ರಾಮ್ ಇನ್ನು ಮದುವೆಯಾಗದೆ ಸಿಂಗಲ್ ಆಗಿರಲು ಕಾರಣ ಏನು ಗೊತ್ತಾ?…. ಅಸಲಿ ಸತ್ಯ ಇಲ್ಲಿದೇ ನೋಡಿ..??
ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ಎಂದೆ ಖ್ಯಾತಿ ಪಡೆದಿರುವ ನಟಿ ಎಂದರೆ ಅದು ನಟಿ ರಚಿತಾ ರಾಮ್. ನಟಿ ರಚಿತಾ ರಾಮ್ ಅವರು ತಮ್ಮ ಅದ್ಭುತ ನಟನೆ ಹಾಗೂ ತಮ್ಮ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು 10 ವರ್ಷಗಳನ್ನು ಪೂರೈಸಿದ್ದಾರೆ.
ನಟಿ ರಚಿತಾ ರಾಮ್ ಅವರ ಸಿನಿಮಾಗಳು ಎಂದರೆ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಸ್ಯಾಂಡಲ್ವುಡ್ ನ ಸ್ಟಾರ್ ನಟರಾಗಿರುವ ನಟ ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್, ಧ್ರುವ ಸರ್ಜಾ, ರಮೇಶ್ ಸೇರಿದಂತೆ ಸ್ಯಾಂಡಲ್ವುಡ್ ನ ಅನೇಕ ಸ್ಟಾರ್ ನಟರ ಜೊತೆಗೆ ನಟಿ ರಚಿತಾ ರಾಮ್ ಅವರು ಅಭಿನಯಿಸಿದ್ದಾರೆ.
ಇನ್ನು ಸ್ಯಾಂಡಲ್ವುಡ್ ನ ಬಹು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಸಹ ನಟಿ ರಚಿತಾ ರಾಮ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅವರು ಜೀ ಕನ್ನಡ ವಾಹಿನಿಯ ಅರಸಿ ಧಾರವಾಹಿಯಲ್ಲಿ ಕಳನಾಯಕಿ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು. ಇನ್ನು ಈ ಮೂಲಕ ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.
ಇನ್ನು ನಟಿ ರಚಿತಾ ರಾಮ್ ಅವರು ಮೊದಲು ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ಮೊದಲು ಅಭಿನಯಿಸುವ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟರು. ನಂತರ ನಟಿ ರಚಿತಾ ರಾಮ್ ಅವರು ತಿರುಗಿ ನೋಡಲೇ ಇಲ್ಲ. ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಅವರು ಇದೀಗ ಕನ್ನಡ ಸಿನಿಮಾರಂಗದಲ್ಲಿ ತಮ್ಮ 10 ವರ್ಷ ಪೂರೈಸಿದ್ದಾರೆ. ಅಲ್ಲದೆ ಇದೀಗ ನಟಿ ರಚಿತಾ ರಾಮ್ ಹಾಗೂ ನಟ ದರ್ಶನ್ ಅವರ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇನ್ನು ಇದೀಗ ನಟಿ ರಚಿತಾ ರಾಮ್ ಬಗ್ಗೆ ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು ನಟಿ ರಚಿತಾ ರಾಮ್ ಅವರ ಮದುವೆ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ರಚಿತಾ ರಾಮ್ ಅವರಿಗೆ 30 ವರ್ಷ ವಯಸ್ಸಾಗಿದ್ದರೂ ಸಹ ಅವರು ಇನ್ನು ಸಹ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ನಟಿಗೆ ಕೇಳಲಾಗಿತ್ತು. ಇನ್ನು ಇದೀಗ ಸ್ವತಃ ನಟಿ ರಚಿತಾ ರಾಮ್ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ನನಗೆ ಸರಿ ಹೊಂದುವ ಗಂಡು ಇನ್ನು ದೊರಕಿಲ್ಲ, ಆತ ದೊರಕುವವರೆಗೂ ನಾನು ಮದುವೆಯಾಗಲ್ಲ. ನಾನು ಸಿನಿಮಾರಂಗದಲ್ಲಿ ಇನ್ನು ಸಾಕಷ್ಟು ಸಾಧನೆ ಮಾಡಬೇಕು. ನಾನು ಮದುವೆ ಬಗ್ಗೆ ಇನ್ನು ಯೋಚಿಸಿಲ್ಲ. ನನ್ನ ಸಾಧನೆ ಎಲ್ಲಾ ಮುಗಿದ ನಂತರ ನಾನು ಮದುವೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ ನಟಿ ರಚಿತಾ ರಾಮ್. ಇನ್ನು ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.