ಬಸ್ಸಿನ ಪಕ್ಕದ ಸೀಟಲ್ಲಿ ಕೂತಿದ್ದ ಯುವತಿಗೆ ಕೆಲಭಾಗವನ್ನು ಎತ್ತಿ ಎತ್ತಿ ತೋರಿಸಿದ ಯುವಕ, ರೊಚ್ಚಿಗೆದ್ದ ಯುವತಿ ಮಾಡಿದ್ದೇನು ಗೊತ್ತಾ

ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗಳಲ್ಲಿ ವಿಕೃತ ಮನಸ್ಥಿತಿಯ ಜನರಿದ್ದಾರೆ. ಹೆಣ್ಣೆಂದರೆ ಸಾಕು ಆಸೆ ಕಂಗಳಿಂದ ನೋಡಿ ತಮ್ಮ ತೇವಲನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಹೌದು ಇದೀಗ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನು ಕೇರಳದ ಕರಮಾನಾ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತ ವ್ಯಕ್ತಿಯನ್ನು ಜಯನ್​ ಎಂದು ಗುರುತಿಸಲಾಗಿದೆ. ಈತ ಕರಮಾನದ ಚುಲ್ಲಮುಕ್ಕುವಿನ ಮುಂಡಪ್ಲವಿಲ ವೀಟಿಲ ಮೂಲದ ನಿವಾಸಿ.

ನೆಮ್ಮಮ್ ಬಸ್ ನಿಲ್ದಾಣನಿಂದ ಬಸ್ಸನ್ನೇರಿದ ಹುಡುಗಿಗೆ ಜಯನ್ ತನ್ನ ಗುಪ್ತಾಂಗ ಪ್ರದರ್ಶಿಸಿದ್ದ. ತನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವಾಗಲೇ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆರಂಭದಲ್ಲಿ ಯುವತಿ ನಿರ್ಲಕ್ಷಿಸಿದಳು. ಆದರೆ, ಅನೇಕ ದೂರದವರೆಗೆ ಆರೋಪಿ ತನ್ನ ಕೃತ್ಯವನ್ನು ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಯುವತಿ ಬಸ್ನ ಸಿಬ್ಬಂದಿಗೆ ಮಾಹಿತಿ ನೀಡಿದಳು. ಬಳಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕರಮಾನಾ ವೃತ್ತ ನಿರೀಕ್ಷಕ ಸುಜಿತ್, ಸಬ್ ಇನ್ಸ್ಪೆಕ್ಟರ್ ಸಂತು ಮತ್ತು ಸಿಪಿಒ ಸಾಜನ್ ಮತ್ತು ಅಭಿಲಾಶ್ ಯುವತಿಯ ಹೇಳಿಕೆಯನ್ನು ಪಡೆದು, ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಹೆಣ್ಣು ಮಕ್ಕಳಿಗೆ ನಡೆಯುವ ಅದೆಷ್ಟೋ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರದೆ ಹೋಗುತ್ತಿರುವುದು ವಿಷಾಧನೀಯ.ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಹೇಳಿ ಕೊಡುವುದು ಕೂಡ ಒಳ್ಳೆಯದು

LihatTutupKomentar