Crime News: ಇನ್ನು ವಯಸ್ಸಿಗೆ ಬಂದಿಲ್ಲ, ಆದರೂ ಮದುವೆಯಾಗಬೇಕು ಎಂದು ಖತರ್ನಾಕ್ ಪ್ಲಾನ್ ಮಾಡಿದ ಹುಡುಗಿ. ಈ ವಯಸ್ಸಿಗೆ ಆಸೆ. ಆದರೆ ಕೊನೆಗೆ ಏನಾಯ್ತು ಗೊತ್ತೇ?
ಪ್ರೀತಿ ಎನ್ನುವುದು ಒಬ್ಬ ವ್ಯಕ್ತಿಯ ಕೈಯಲ್ಲಿ ಊಹೆ ಮಾಡಲಾರದಂಥ ಕೆಲಸವನ್ನು ಸಹ ಮಾಡಿಸಿಬಿಡುತ್ತದೆ. ತಮ್ಮ ಪ್ರೀತಿಯನ್ನು ಪಡೆದುಕೊಳ್ಳಲು, ವಯಸ್ಸು ಅಥವಾ ಇನ್ಯಾವುದೇ ವಿಚಾರವನ್ನು ಲೆಕ್ಕಿಸದೆ, ಮನಸ್ಸಿಗೆ ಬಂದ ಹಾಗೆ ಏನನ್ನೋ ಮಾಡಲು ಹೋಗಿ, ಕೊನೆಗೆ ಅದು ತಪ್ಪಾಗಿ ತೊಂದರೆ ಅಗುವಂಥ ಅನೇಕ ಘಟನೆಗಳು ಸಹ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ಘಟನೆ ನಡೆದಿದ್ದು, ಏನಾಗಿದೆ ಗೊತ್ತಾ?
ಈ ಘಟನೆ ನಡೆದಿರುವುದು, ಮುಂಬೈನಲ್ಲಿ, ಇನ್ನು 18 ತುಂಬಿಲ್ಲದ ಹುಡುಗಿಯನ್ನು ಪ್ರೀತಿ ಮಾಡಿದ ಹುಡುಗ, ಆಕೆಯನ್ನು ಮದುವೆಯಾಗಲೇಬೇಕು ಎನ್ನುವ ಹಠದಲ್ಲಿ, ಆಕೆಯ ವಯಸ್ಸನ್ನೇ ಬದಲಾಯಿಸಿ ಮದುವೆ ಮಾಡಿಕೊಂಡಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು, ಅವರ ಅತಿಥಿಯಾಗಿದ್ದಾನೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹುಡುಗನಿಗೆ 23ವರ್ಷವಾಗಿತ್ತು, ಇವನು ಪ್ರೀತಿ ಮಾಡುತ್ತಿದ್ದ ಹುಡುಗಿ ಹುಟ್ಟಿದ್ದು 2006ರ ಮೇ 7ರಂದು.
ಆಕೆ ಇನ್ನು ಮೇಜರ್ ಆಗಿಲ್ಲ. ಆದರೆ ಆಕೆಯನ್ನು ಮದುವೆಯಾಗಬೇಕು ಎಂದು, ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸಿ ಬಿಟ್ಟಿದ್ದಾನೆ. ಆಕೆ ಮೇಜರ್ ಎಂದ್ ತೋರಿಸಲು, 2004ರ ಮಾರ್ಚ್ 12ರಂದು ಹುಟ್ಟಿದ್ದು ಎಂದು ಬದಲಾಯಿಸಿದ್ದಾನೆ, ಮದುವೆ ರಿಜಿಸ್ಟರ್ ಗಾಗಿ ಪೊಲೀಸ್ ಸ್ಟೇಶನ್ ಗೆ ಬಂದಾಗ, ಪೊಲೀಸರಿಗೆ ಅನುಮಾನ ಬಂದು ಹುಡುಗಿಯ ತಂದೆಗೆ ಕರೆ ಮಾಡಿದ್ದಾರೆ
ಆಗ ಹುಡುಗಿಯ ತಂದೆ ಮಗಳ ಶಾಲೆಗೆ ಕೊಟ್ಟಿದ್ದ ಬರ್ತ್ ಸರ್ಟಿಫಿಕೇಟ್ ಅನ್ನು ಪೊಲೀಸರಿಗೆ ಕೊಟ್ಟಿದ್ದು, ಆಗ ಅಸಲಿ ವಿಚಾರ ಏನು ಎಂದು ಗೊತ್ತಾಗಿದೆ. ಪೊಲೀಸರು ಅವರ ಸ್ಟೈಲ್ ನಲ್ಲಿ ವಿಚಾರಿಸಿದಾಗ, ತಾನು ಮೇಜರ್ ಎನ್ನುವ ಹಾಗೆ ತೋರಿಸಲು, ಆ ರೀತಿ ಬದಲಾವಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮದುವೆ ಮಾಡಿಕೊಳ್ಳುವುದಕ್ಕೆ ಎಂಥ ಕೆಲಸ ಮಾಡಿದ್ದಾರೆ ಎನ್ನುವುದನ್ನು ನೋಡಿ, ನೆಟ್ಟಿಗರು ಶಾಕ್ ಆಗಿದ್ದಾರೆ